ಅರಸು ಪ್ರಧಾನಿ ಅಂತ ಹೇಳುವ ಆಟ ಅದು ಚೆನ್ನೆಮಣೆಯಲ್ಲಿ ಆಡುವ ಆಟ.ತುಳುನಾಡಿನಲ್ಲಿ ಆಟಿ ತಿಂಗಳಿನಲ್ಲಿ ಮಾತ್ರ ಈ ಚೆನ್ನೆ ಮಣೆ ಆಟವನ್ನು ಆಡುವ ಸಂಪ್ರದಾಯ ಇದೇ. ಯಾಕೆಂದರೆ ಆಟಿ ತಿಂಗಳಿನಲಿ ಜೋರಾಗಿ ಮಳೆ ಬರುವ ಕಾರಣ ಯಾವುದೇ ರೀತಿಯಲ್ಲಿ ಕೃಷಿ ಬೇಸಾಯಗಳನ್ನು, ಕೆಲಸಗಳನ್ನು ಮಾಡಲು ಆಗದೆ ಮನೆಯಲ್ಲಿಯೇ ಕೂತು ಹೊತ್ತು ಕಳೆಯಲು ಚೆನ್ನೆಮಣೆ ಆಟವನ್ನು ಆಡುತಿದ್ದರು. ಸೋಣ ಬಂದ ನಂತರ ಮಳೆ ಕಡಿಮೆ ಆದಾಗ ಚೆನ್ನೆಮಣೆ ಯನ್ನು ಅಟ್ಟಕ್ಕೆ ಹಾಕುವುದು ವಾಡಿಕೆ.ಹೆಚ್ಚು ಅಂದರೆ ಅಷ್ಟಮಿ ವರೆಗೆ ಆಡಬಹುದು. == ಚೆನ್ನೆಮಣೆಯ ಪರಿಚಯ == ಚೆನ್ನೆಮಣೆ ಯನ್ನು ಒಳ್ಳೆ ಜಾತಿಯ ಮರದಲ್ಲಿ ತಯಾರು ಮಾಡುತ್ತಾರೆ.ಈ ಮಣೆ ಆಯತಾಕಾರದಲ್ಲಿ ಇರುತ್ತದೆ. ಇದರಲ್ಲಿ ಕಾಯಿಗಳನ್ನು ಹಾಕಲು ಗುಳಿಗಳನ್ನು ಮಾಡಿರುತ್ತಾರೆ.ಅದರಲ್ಲಿ ಕಾಯಿಗಳನ್ನು ಹಾಕಿ ಇಡಬಹುದು. ಒಂದೊಂದು ಬದಿಯಲ್ಲಿ ಏಳು ಗುಳಿಗಳು ಇರುತ್ತವೆ. ಆಟದಲ್ಲಿ ಅದನ್ನು ಮನೆ ಅಂತ ಕರೆಯುತ್ತಾರೆ. == ಚೆನ್ನೆಮಣೆಯ ಆಟದ ಉಪಯೋಗ == ಚೆನ್ನೆಮಣೆ ಆಟ ಆಡಿದರೆ ನಮ್ಮ ಮೆದುಳಿನ ಶಕ್ತಿ ಹೆಚ್ಚಾಗುತ್ತದೆ. ಎದುರಾಳಿಯು ಆಡುವ ಆಟವನ್ನು ನೋಡುವಾಗ ನಮ್ಮ ತಲೆಯಲ್ಲೂ ಆಲೋಚನಾ ಶಕ್ತಿಯು ಹೆಚ್ಚಾಗುತ್ತದೆ. ಚೆನ್ನೆಮಣೆ ಆಡುವಾಗ ಹೊತ್ತು ಹೋದದ್ದೇ ತಿಳಿಯುವುದಿಲ್ಲ. ಮನಸಿಗೆ ಶಾಂತಿ ದೊರೆಯುತ್ತದೆ. ಮನೆಯವರು, ನೆರೆಮನೆಯವರು ಹೀಗೆ ಎಲ್ಲರೂ ಸೇರಿ ಆಡುವಾಗ ಸಾಮಾಜಿಕ ಬಾಂದವ್ಯ ಹೆಚ್ಚಾಗುತ್ತದೆ. ಚೆನ್ನೆಮಣೆ ಯಲ್ಲಿರುವ ಗುಳಿ(ಮನೆಯಿಂದ )ಕಾಯಿ ಹೆಕ್ಕಲು ಬೆರಳು ಹಾಕುವಾಗ ಬೆರಳಿನ ತುದಿಗೆ ಬಲ ಬಿದ್ದಾಗ ಅದು ಶಕ್ತಿ ಕೇಂದ್ರದ ಮೇಲೆ ಒತ್ತಡ ಬಿದ್ದು ರಕ್ತ ಸಂಚಾರ ಸರಾಗವಾಗಿ ಆಗುತ್ತದೆ. ಇದರಿಂದ ನಮ್ಮ ಶರೀರಕ್ಕೆ ಆರೈಕೆ ಸಿಗುತ್ತದೆ. == ಆಟಕ್ಕೆ ಬೇಕಾದ ವಸ್ತುಗಳು == ಈ ಆಟಕ್ಕೆ ಚೆನ್ನೆಮಣೆ ಮತ್ತು ಆಟ ಆಡಲು ಕಾಯಿಗಳು ಬೇಕು.ಸಾಮಾನ್ಯವಾಗಿ ಮಂಜೊಟ್ಟಿ ಕಾಯಿಗಳಲ್ಲಿ ಆಡುತ್ತಾರೆ. ಆ ಕಾಯಿ ಇಲ್ಲಾಂದ್ರೆ, ಹುಣಸೆ ಹಣ್ಣಿನ ಬೀಜ (ಪುಳಿಂಕಟೆ )ಇದರಲ್ಲಿ ಆಡುತ್ತಾರೆ. ಅರಸು ಪ್ರಧಾನಿ ಆಟ ಆಡಲು ೩ ಜನ ಬೇಕಾಗುತ್ತದೆ.ಅದರಲ್ಲಿ ಒಬ್ಬ ಅರಸ, ಇನ್ನೊಬ್ಬ ಮಂತ್ರಿ, ಮತ್ತೊಬ್ಬ ಸೇವಕ. == ಆಟ ಆಡುವ ವಿಧಾನ == ಚೆನ್ನೆಮಣೆ ಯನ್ನು ಎದುರಿಗೆ ಇಟ್ಟು ಅದರ ಎದುರು ಬದುರಾಗಿ ಆಡುವವರು ಕುಳಿತುಕೊಳ್ಳಬೇಕು.ಎಲ್ಲಾ ಗುಳಿ (ಮನೆ )ಗಳಿಗೆ ನಾಲ್ಕು ನಾಲ್ಕು ಹಾಕಿಕೊಂಡು ಬರಬೇಕು. ಅದರಲ್ಲಿ ಒಂದು ಬದಿಯ ನಾಲ್ಕು ಮನೆ ಮಂತ್ರಿಗೆ, ಇನ್ನೊಂದು ಬದಿಯ ನಾಲ್ಕು ಮನೆ ಸೇವಕನಿಗೆ, ನಡುವೆ ಇರುವ ಆರು ಮನೆ ಅರಸನಿಗೆ.ಸುರುವಿಗೆ ಅರಸ ಆಡಲು ಸುರು ಮಾಡಬೇಕು. ಅವನ ಒಂದು ಮನೆಯಿಂದ ಕಾಯಿ ತೆಗೆದು ಎಲ್ಲಾ ಮನೆಗಳಿಗೆ ಹಾಕಿಕೊಂಡು ಬರಬೇಕು.ನಾಲ್ಕು ಕಾಯಿ ಹಾಕಿದ ನಂತರ ಐದನೆಯ ಮನೆಯಿಂದ ಕಾಯಿ ತೆಗೆದು ಹಾಕಿಕೊಂಡು ಬರಬೇಕು. ಹೀಗೆ ಹಾಕಿಕೊಂಡು ಬರುವಾಗ ಒಂದು ಮನೆ ಖಾಲಿ ಇದ್ದು ನಂತರದ ಮನೆಯಲ್ಲಿ ಕಾಯಿ ಇದ್ದರೆ ಅದು ಅರಸನಿಗೆ ಸಿಗುತ್ತದೆ, ಇದಕ್ಕೆ 'ಪೆರ್ಗೆ 'ಅಂತ ಕರೆಯುತ್ತಾರೆ.ಎದುರಿಗೆ ಎರಡು ಮನೆ ಖಾಲಿ ಇದ್ದರೆ ಆಟ ಅಡಲಿಕ್ಕೆ ಇಲ್ಲ.ಇದಕ್ಕೆ ಕೂತುಕೊಳ್ಳುವುದು ಅಂತ ಹೇಳ್ತಾರೆ. ನಂತರ ಪ್ರಧಾನಿ ಆಟ ಅಡಲಿಕ್ಕೆ ಅವನ ಮನೆಯಿಂದ ಕಾಯಿ ತೆಗೆದು ಎಲ್ಲಾ ಮನೆಗಳಿಗೆ ಹಾಕಿಕೊಂಡು ಬರಬೇಕು. ಅರಸು ಆಡಿದ ರೀತಿನೇ.ಮಂತ್ರಿ ಕೂಡ ಪೆರ್ಗೆ ತಗೋಬಹುದು. ಮಂತ್ರಿ ಕೂತ ನಂತರ ಸೇವಕ ಆಡಲು ಸುರು ಮಾಡಬೇಕು.ಅವನು ಪೆರ್ಗೆ ತಗೋಬಹುದು.ಆಡುವಾಗ ಒಂದು ಮನೆಯಲ್ಲಿ ಮೂರು ಕಾಯಿ ಇದ್ದರೆ ಅದನ್ನು 'ಮುಕ್ಕೆ 'ಅಂತ ಕರೆಯುತ್ತಾರೆ. ಅದಕ್ಕೆ ಒಂದು ಕಾಯಿ ಬಿದ್ದರೆ ಅದು ' ಬುಳೆ ' ಆಗುತ್ತದೆ.ಅದನ್ನು ಆ ಮನೆಯವರು ಇನ್ನೊಂದು ಕಾಯಿ ಹಾಕುವ ಮುಂಚೆ ತೆಗೆದಿಟ್ಟು ಕೊಳ್ಳಬೇಕು. ಮತ್ತೊಂದು ಕಾಯಿ ಬಿದ್ದರೆ ಅದು ಹಾಳಾಗುತ್ತದೆ. ನಂತರ ತೆಗೆಯಲಿಕೆ ಇಲ್ಲ.ಹೀಗೆ ಆಟ ಆಡಿ ಎಲ್ಲಾ ಕಾಯಿಗಳು ಮುಗಿಯುವಾಗ ಆಟ ಮುಗಿಯುತ್ತದೆ. ಮುಗಿದಾಗ ಅರಸನಿಗೆ ಮಂತ್ರಿ ಮತ್ತೆ ಸೇವಕ ಒಂದೊಂದು ಕಾಯಿ ಗೇಣಿ ಅಂತ ಕೊಡಬೇಕು. ನಂತರ ಎಲ್ಲಾರೂ ಸಿಕ್ಕಿದ ಕಾಯಿಗಳನ್ನು ಅವರವರ ಮನೆಯಲ್ಲಿ ತುಂಬಿಸಬೇಕು. ಎಲ್ಲಾ ಮನೆಯಲ್ಲಿ ತುಂಬಿಸಲು ಕಾಯಿ ಇಲ್ಲಾಂದ್ರೆ ಆ ಮನೆಗೆ ಪೇಪರ್ ತುಂಡು ಇಡಬೇಕು. ಆ ಮನೆಗೆ ಬೆಂಕಿ ಬಿತ್ತು ಅಂತ. ಹೀಗೆ ಆಟ ಆಡಿ ಎಲ್ಲಾ ಮನೆಗೆ ಬೆಂಕಿ ಬಿದ್ದವ ಆಟದಲ್ಲಿ ಸೋತ ಅಂತ ಅರ್ಥ. == ಉಲ್ಲೇಖಗಳು ==